ಪುಟಗಳು

ಪಾಠ : 8 ಸುಕುಮಾರ ಸ್ವಾಮಿಯ ಕಥೆ

                  

ಶಿವಕೋಟ್ಯಾಚಾರ್ಯ

ಶಿವಕೋಟ್ಯಾಚಾರ್ಯ
                 ಪಂಪಯುಗದಲ್ಲಿ ರಚಿತವಾದ ಒಂದೇ ಒಂದು ಗದ್ಯ ಗ್ರಂಥವೆಂದರೆ ''ವಡ್ಡಾರಾಧನೆ''. ಇದನ್ನು ರಚಿಸಿದವರು ಶಿವಕೋಟ್ಯಾಚಾರ್ಯ. ಇವರ ಕಾಲ ಸುಮಾರು ಕ್ರಿ.ಶ.೯೨೦ ರ ಸನಿಹದಲ್ಲಿದೆ. ಶ್ರೇಷ್ಠ ಜೈನ ಕವಿಯಾದ ಶಿವಕೋಟ್ಯಾಚಾರ್ಯರು ಹಳೆಗನ್ನಡದಲ್ಲಿ ಸುಂದರವಾದ ಗದ್ಯಕಾವ್ಯವನ್ನು ರಚಿಸಿದರು. ಈ ಕಥಾ ಗ್ರಂಥದಲ್ಲಿ ೧೯ ಮಹಾತ್ಮರ ಜೀವನ ಕಥೆಗಳಿವೆ. ಕಥಾಕೋಶವೆಂದೇ ಈ ಗ್ರಂಥ ಪ್ರಸಿದ್ದವಾಗಿದೆ. ಈ ಕಾವ್ಯವು ೯ ನೇ ಶತಮಾನದ ನಂತರದಲ್ಲಿಯೇ ರಚಿತವಾಗಿರಬೇಕೆಂದು ವಿಮರ್ಶಕರು ತಿಳಿದಿದ್ದಾರೆ. ವಡ್ಡಾರಾಧನೆ ಎಂದರೆ ವೃದ್ದರ, ಜ್ಞಾನಿಗಳ, ಜೈನ ಯತಿಗಳ ಜೀವನ ಸಾಧನೆಗಳಿಗೆ ಕೊಡುವ ಗೌರವವಾಗಿರುವದು. ಈ ವಡ್ಡಾರಾಧನೆಯ ಕಥೆಗಳಲ್ಲಿ ಜೀವ ತುಂಬಿದ ಶಿವಕೋಟ್ಯಾಚಾರ್ಯ ಬೇರೆ ಬೇರೆ ರೀತಿಯಿಂದ ಕಥೆಯನ್ನು ಹೇಳಿದ್ದಾರೆ. ನೀತಿ, ಚರಿತ್ರೆ, ಧರ್ಮ, ವ್ಯವಹಾರ ಹೀಗೆ ಹಲವು ವಿಷಯಗಳು ಈ ಕಥೆಗಳಲ್ಲಿವೆ. ಧಾರ್ಮಿಕ ಉದ್ದೇಶದಿಂದ ರಚಿತವಾದ ಈ ಕೃತಿ ಹಳೆಗನ್ನಡದ ಒಂದು ಉತ್ತಮ ಕೃತಿಯಾಗಿರುವುದು. ಇದು ಒಂದು ಅದ್ಭುತ ಗದ್ಯ ಕಾವ್ಯ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಓದು ಬೆಳಕು ಕಾರ್ಯಕ್ರಮದ ವರದಿ

ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಓದು ಬೆಳಕು ಕಾರ್ಯಕ್ರಮ